March 2, 2026
001

ಹಿರಿಯೂರು:

ಕನ್ನಡ ರಾಜ್ಯೋತ್ಸವದ ರಾಜ್ಯ ಪ್ರಶಸ್ತಿ ಪಡೆದಿರುವ  ಚಿತ್ರದುರ್ಗ ಜಿಲ್ಲೆಯ ಚೀಳಂಗಿ ಗ್ರಾಮದ ಜಾನಪದ ಕಲಾವಿದರಾದ ಹನುಮಂತಪ್ಪಮಾರಪ್ಪರವರನ್ನು ತಾಲ್ಲೂಕಿನ  ರಂಗಭೂಮಿಯ ಕಲಾವಿರಾದ  ಹೆಚ್.ಎಸ್. ಮಾರುತೇಶಕೂನಿಕೆರೆರವರು  ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಲಾವಿರಾದ  ಹೆಚ್.ಎಸ್. ಮಾರುತೇಶಕೂನಿಕೆರೆರವರು  ಜಾನಪದ ಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪಡೆದು, ನಮ್ಮ ಚಿತ್ರದುರ್ಗ ಜಿಲ್ಲೆಗೆ ಪ್ರಶಸ್ತಿ ತಂದು ಕೊಟ್ಟಿರುವ ಹನುಮಂತಪ್ಪಮಾರಪ್ಪರವರ ಕಲಾ ಸೇವೆ ಇಂದಿನ ಯುವಕಲಾವಿದರಿಗೆ ಸ್ಪೂರ್ತಿಯಾಗಿದೆ ಎಂಬುದಾಗಿ ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹನುಮಂತಪ್ಪಮಾರಪ್ಪರವರು ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲಿ ಸ್ವಯಂ ಪ್ರೇರಿತವಾಗಿ ಕಲೆ ಸಾಹಿತ್ಯ ಸಾಂಸ್ಕೃತಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೀವೂ ಸಹ ಮುಂದಿನ ದಿನಗಳಲ್ಲಿ ರಾಜ್ಯ ಪ್ರಶಸ್ತಿ ಸ್ವೀಕರಿಸುವಂತಾಗಲಿ ಎಂಬುದಾಗಿ ಅವರು  ಹೇಳಿದರು.

ಈ ಸಂದರ್ಭದಲ್ಲಿ ಕನ್ನಡರಾಜ್ಯೋತ್ಸವದ ರಾಜ್ಯಪ್ರಶಸ್ತಿ ಪುರಸ್ಕೃತರಾದ ಜಾನಪದ ಕಲಾವಿದರಾದ ಹನುಮಂತಪ್ಪಮಾರಪ್ಪ ಹಾಗೂ ಅವರ ಕುಟುಂಬಸ್ಥರೆಲ್ಲರೂ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *