March 2, 2026
00002

ಹಿರಿಯೂರು :

ಬಿ.ಜೆ.ಪಿ. ಎಂ.ಎಲ್.ಸಿ. ಸಿ.ಟಿ.ರವಿ ಅವರು ಸವಿತಾ ಸಮಾಜದ ಬಗ್ಗೆ ನಿಷೇಧಿತ ಪದವನ್ನು ಬಳಕೆ ಮಾಡಿ, ಜಾತಿನಿಂದನೆ ಮಾಡಿರುವುದರಿಂದ ಈ ಕೂಡಲೇ ಅವರ ವಿರುದ್ಧ ಸೂಕ್ತ ಕಾನೂನುಕ್ರಮವನ್ನು ಜರುಗಿಸಬೇಕು ಎಂಬುದಾಗಿ ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷರಾದ ಎನ್.ಬಸವರಾಜ್ ಒತ್ತಾಯಿಸಿದರು.

ತಾಲ್ಲೂಕು ಸವಿತಾ ಸಮಾಜದ ವತಿಯಿಂದ ನಗರಠಾಣೆಯ ಆರಕ್ಷಕ ಠಾಣೆಯ ನಿರೀಕ್ಷಕರಿಗೆ ಮನವಿಪತ್ರವನ್ನು ಸಲ್ಲಿಸಿ, ನಂತರ ಅವರು ಮಾತನಾಡಿದರು.            

ಬಿ.ಜೆ.ಪಿ. ಎಂ.ಎಲ್.ಸಿ. ಸಿ.ಟಿ. ರವಿ ಅವರು ಸವಿತಾ ಸಮಾಜದ ಬಗ್ಗೆ ಸರ್ಕಾರವು ನಿಷೇಧಿಸಿರುವ ಪದವನ್ನು ಬಳಕೆ ಮಾಡಿ ಮಾತನಾಡಿ, ಸವಿತಾಸಮಾಜದವರಿಗೆ ರೊಚ್ಚಿಗೇಳುವಂತೆ ಮಾಡಿದ್ದಾರೆ. ಸವಿತಾ ಸಮಾಜದ ಬಗ್ಗೆ ನಿಷೇಧಿಸಿದ ಪದ ಬಳಕೆ ಮಾಡಿ ಜಾತಿನಿಂದನೆ ಮಾಡಿರುವ ಅವರ ವರ್ತನೆ ಖಂಡನೀಯ ಎಂಬುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷರಾದ ಎನ್.ಬಸವರಾಜ್, ಗೌರವ ಅಧ್ಯಕ್ಷರಾದ ಗಣೇಶ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕರಿಯಣ್ಣ,  ನಗರ ಅಧ್ಯಕ್ಷರಾದ ನರಸಿಂಹಮೂರ್ತಿ, ಸಮಾಜದ ಮುಖಂಡರು ತಿಪ್ಪೇಶ್, ಶ್ರೀಧರ, ಎಂ.ಆರ್.ಗಣೇಶ್, ಕೆ.ವಿ.ಶ್ರೀಧರ್,ಕರಿಯಣ್ಣ, ನಗರಅಧ್ಯಕ್ಷ ನರಸಿಂಹಮೂರ್ತಿ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *