
ಹಿರಿಯೂರು:
ಧರ್ಮವು ಸಮಾಜದ ಏಕತೆ, ಪ್ರೀತಿ ಮತ್ತು ಶಾಂತಿಯ ಸಂಕೇತ. ಈ ಮಸೀದಿ ಜನರ ಮಧ್ಯೆ ಸಹೋದರತ್ವ ಮತ್ತು ಭಾವೈಕ್ಯತೆಯನ್ನು ಬೆಳೆಸಲಿ ಎಂಬುದಾಗಿ ರಾಜ್ಯ ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಮಾತನಾಡಿದರು.

ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಾರ್ವಜನಿಕ ಜಾಮೀಯಾ ಮಸೀದಿಗೆ ಭೇಟಿ ನೀಡಿ ಅವರು ಮಾತನಾಡಿದರು.

ಇದೇ ವೇಳೆ ಧಾರ್ಮಿಕ ಸೇವೆಗೆ ತಮ್ಮನ್ನು ಅರ್ಪಿಸಿರುವ ಎಲ್ಲರಿಗು ಹೃತ್ಪೂರ್ವಕ ಶುಭಾಶಯಗಳನ್ನು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ಶಕೀಲ್ ನವಾಜ್, ಗ್ರಾಮದಮುಖಂಡರು, ಮಸೀದಿಗುರುಗಳು ಉಪಸ್ಥಿತರಿದ್ದರು.

