
ಹಿರಿಯೂರು :
ನಗರಸಭಾ ಅಧ್ಯಕ್ಷರಾದ ಬಾಲಕೃಷ್ಣರವರ ಅಧ್ಯಕ್ಷತೆಯಲ್ಲಿ ನಗರಸಭೆ ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಎಲ್ಲಾ ನಗರಸಭಾ ಸದಸ್ಯರುಗಳ ಸಹಯೋಗದೊಂದಿಗೆ ನಗರಸಭಾ ವ್ಯಾಪ್ತಿಯಲ್ಲಿನ ಆಸ್ತಿ ಮಾಲೀಕರುಗಳಿಂದ ಇ-ಆಸ್ತಿ ಮಾಡಿಕೊಡಲು ಇ ಖಾತಾ ಆಂದೋಲನವನ್ನು ಅಕ್ಟೋಬರ್ 27 ರಿಂದ 30 ರ ವರೆಗೆ ಹಮ್ಮಿಕೊಂಡಿದ್ದು, ಸದರಿ ಇ ಖಾತಾ ಆಂದೋಲನದಲ್ಲಿ ಈದಿನ ಬಂದಂತಹ ಅರ್ಜಿಗಳನ್ನು ಸ್ವೀಕರಿಸಿಲಾಯಿತು.
ಅರ್ಜಿಯನ್ನು ನಿಯಾಮನುಸಾರ ಪರಿಶೀಲಿಸಿ ಕಡತವನ್ನು ತಯಾರಿಸಿ ಅನುಮೋದನೆ ನೀಡಿ ಮಾನ್ಯ ಅಧ್ಯಕ್ಷರಾದ ಶ್ರೀ ಆರ್. ಬಾಲಕೃಷ್ಣ ರವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರಿಗೆ ಇ-ಆಸ್ತಿಗಳನ್ನು ವಿತರಿಸಲಾಯಿತು ಹಾಗೂ ಸಮೀಕ್ಷೆ ಕಾರ್ಯದ ನಿಮಿತ್ತಾ ಸಾರ್ವಜನಿಕರಿಗೆ ನಿಗಧಿತ ಸಮಯದೊಳಗೆ ನೀಡದೇ ಇರುವಂತಹ ಅರ್ಜಿಗಳನ್ನು ಸಹ ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ತಹಶೀಲ್ದಾರ್ ಸಿದ್ದೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ, ನಗರಸಭೆ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಮಮತಾ , ವಿಠ್ಠಲ್, ಸಣ್ಣಪ್ಪ. ಕೆ. ಜಿ. ಗೌಡ ಆರೋಗ್ಯ ನಿರೀಕ್ಷಕರುಗಳಾದ ಸುನೀಲ್, ಸಂಧ್ಯಾ ವೈ.ಎಸ್, ಅಶೋಕ್ ಕುಮಾರ್, ಮಹಾಲಿಂಗರಾಜು, ನಯಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

