March 2, 2026
0004

ಹಿರಿಯೂರು:

ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮೇಲ್ವಿಚಾರಕರಾದ ಹರೀಶ್ ಗೌಡ ರವರು ಭೇಟಿ ನೀಡಿ, ಕೇಂದ್ರ ಸರ್ಕಾರದ ಉಪಯೋಗಗಳು ಸಂಘಕ್ಕೆ ಸಹಕಾರದ ಮೂಲಕ ಸಮೃದ್ಧಿ ಸಚಿವಾಯದ ಪ್ರಮುಖ ಉಪಕ್ರಮಗಳು, ಪ್ರಾಥಮಿಕ ಸಹಕಾರ ಸಂಘಗಳ ಆರ್ಥಿಕ ಬಲವರ್ಧನೆ ಮತ್ತು ಕಂಪ್ಯೂಟರ್ ಕುರಿತಂತೆ ಮಾಹಿತಿ ನೀಡಿದರು.

ಈ ಸಂಧರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಪಿ.ಎಸ್.ಸಾದತ್ ಉಲ್ಲಾ, ಉಪಾಧ್ಯಕ್ಷರಾದ ಪ್ರಕಾಶ್ ಕುಮಾರ್, ನಿರ್ದೇಶಕರುಗಳಾದ ಎಚ್.ಎನ್. ವೆಂಕಟೇಶ್, ಎನ್.ಸುಬ್ರಮಣ್ಯ, ಸಿ.ಸುಬ್ರಮಣ್ಯ, ಪ್ಯಾರೇಜನ್, ವೈ.ಎಸ್. ಉಮಾಶಂಕರ್, ನಾಗರತ್ನಮ್ಮ, ಗೌರಮ್ಮ ಹಾಗೂ ಬ್ಯಾಂಕಿನ ಮೇಲ್ವಿಚಾರಕರಾದ ಹರೀಶ್ ಗೌಡ ಮತ್ತು ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಡಿ. ಯಶವಂತ್ ಮತ್ತು ರೈತರು ಉಪಸ್ಥಿತರಿದ್ದರು

About The Author

Leave a Reply

Your email address will not be published. Required fields are marked *