March 2, 2026
00005

ಹಿರಿಯೂರು:

ರಾಷ್ಟ್ರೀಯ ಸ್ವಯಂಸೇವಕರ ಸಂಘವು ಭಯೋತ್ಪಾದನೆಯ ಸಂಘಟನೆ ಅಲ್ಲ. ಇದೊಂದು ರಾಷ್ಟ್ರಪ್ರೇಮ,  ದೇಶಪ್ರೇಮವನ್ನು ಮೂಡಿಸುವ ಸಂಘಟನೆಯಾಗಿದೆ. ಇಂತಹ ಸಂಘಟನೆಯನ್ನು ಸಚಿವ ಪ್ರಿಯಾಂಕ್  ಖರ್ಗೆ ಅವರು ನಿಷೇಧ ಮಾಡುವ ಹೇಳಿಕೆ ನೀಡಿರುವುದು ಖಂಡನೀಯ ಎಂಬುದಾಗಿ ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ಕೆ. ಅಭಿನಂದನ್ ಅವರು ಹೇಳಿದರು.

ನಗರದಲ್ಲಿರುವ ಆರ್. ಎಸ್. ಎಸ್. ವಿರುದ್ಧ ಕಾಂಗ್ರೆಸ್ ಯುವ ಘಟಕ ನಡೆಸಿದ ಪ್ರತಿಭಟನೆ ವಿರೋಧಿಸಿ ತಾಲ್ಲೂಕು ಬಿಜೆಪಿ ಯುವ ಮೋರ್ಚಾ ವತಿಯಿಂದ ಕಾಂಗ್ರೆಸ್ ವಿರುದ್ಧ ಭಾನುವಾರ ಸಂಜೆ  ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಖರ್ಗೆ ಅವರು ಐಟಿವಿಟಿ ಕಂಪನಿಗಳ ಸಚಿವರಾಗಿದ್ದಾರೆ ಐ.ಟಿ.ಬಿ.ಟಿ. ಕಂಪನಿಗಳ ಸಚಿವರಾಗಿರುವ ಅವರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಇವರ ಬೇಜವಾಬ್ದಾರಿತನದಿಂದ ಬೆಂಗಳೂರಿನಲ್ಲಿ ಇರಬೇಕಾದ ಕಂಪನಿಗಳು ಬೇರೆ ರಾಜ್ಯದ ಕಡೆಗೆ ಹೋಗುತ್ತಿವೆ. ಕಂಪನಿಗಳಿಂದ ಆಗಿರುವ ಅವಮಾನವನ್ನು ಉಳಿಸಿಕೊಳ್ಳಲು ಆರ್. ಎಸ್. ಎಸ್ .ಕಡೆ ಬೊಟ್ಟು ಮಾಡಿರುವ ಪ್ರಿಯಾಂಕ್ ಖರ್ಗೆ  ಬರಿ ಹೇಳಿಕೆ ನೀಡಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂಬುದಾಗಿ ಕಿಡಿ ಕಾರಿದರು.

ರಾಜ್ಯದಲ್ಲಿ ಇತ್ತೀಚೆಗೆ ಗೂಗಲ್ ಕಂಪನಿ ಎಂಬುದು ಆಂಧ್ರಪ್ರದೇಶಕ್ಕೆ ಸ್ಥಳಾಂತರ ಆಗಿದೆ. ಇದರಿಂದ ರಾಜ್ಯದಲ್ಲಿ ನಿರುದ್ಯೋಗ ಉದ್ಭವಿಸಿದೆ. ಇದರ ಕಡೆ ಗಮನ ಹರಿಸದ ಸಚಿವರು ಆರ್.ಎಸ್.ಎಸ್ ವಿರುದ್ಧ ಮಾತನಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಇದು ಅವರ ಮೂರ್ಖತನದ ಪರಮಾವಧಿಯಾಗಿದೆ  ಎಂದರಲ್ಲದೆ,

ನಗರದಲ್ಲಿ ಸಂವಿಧಾನ ಬಾಹಿರವಾಗಿ ಅಂಬೇಡ್ಕರ್ ಫೋಟೋ ಮುಂದೆ ಇಟ್ಟುಕೊಂಡು ಪ್ರತಿಕೃತಿ ದಹಿಸುತ್ತಾರೆ, ಸಂವಿಧಾನ ಬಾಹಿರವಾಗಿ ನಡೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ  ಬಿಜೆಪಿ ಪಕ್ಷದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂಬುದಾಗಿ ಅವರು ಹೇಳಿದರು.

ಬಿ.ಜೆ.ಪಿ. ಯುವ ಮೋರ್ಚಾ ಅಧ್ಯಕ್ಷ ಕೆ. ಟಿ. ಹನುಮಂತ ಅವರು  ಮಾತನಾಡಿ ಈ ದೇಶದಲ್ಲಿ ನಿಜವಾದ ಅಂಬೇಡ್ಕರ್ ವಿರೋಧಿ ಪಕ್ಷ ಇದ್ದರೆ ಅದುವೇ ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧಿಸುವ ದುಸ್ಸಾಹಸಕ್ಕೆ ಕೈ ಹಾಕಿರುವುದು ಪ್ರಿಯಾಂಕ ಖರ್ಗೆ ಹೇಡಿತನದ ಕೆಲಸವಾಗಿದೆ ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಉಪಾಧ್ಯಕ್ಷರಾದ  ತಮ್ಮಣ್ಣ,  ರಾಘವೇಂದ್ರ,  ಹರ್ಷ,  ಪ್ರಧಾನ ಕಾರ್ಯದರ್ಶಿ ನಿತಿನ್ ಗೌಡ,  ಯೋಗೇಶ್,  ಮುಖಂಡರಾದ ಪ್ರಜ್ವಲ್,  ಮುರಳೀಧರ, ವೇದಮೂರ್ತಿ,  ತಿಪ್ಪೇಶ್,  ಮಂಜುನಾಥ್,  ಗೋವಿಂದಪ್ಪ,  ಚಿರಂಜೀವಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *